25-May-2013
ನೋಡಲೇಬೇಕಾದ ೧೦೧ ಕನ್ನಡ ಚಿತ್ರಗಳು
ಚುಕ್ಕುಬುಕ್ಕು

ಇನ್ನಿಲ್ಲದ ಸಿನಿಮಾಪ್ರೇಮದ  ಉತ್ಸಾಹಿ ಯುವಕ ರವೀಂದ್ರ ವಲಗೆರೆ 'ನೋಡಲೇಬೇಕಾದ ೧೦೧ ಕನ್ನಡ ಸಿನಿಮಾಗಳು' ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ಬರೀ ಸಿನಿಮಾಗಳ ಪಟ್ಟಿಯಷ್ಟೇ ಇಲ್ಲ ಎಂಬುದಕ್ಕೆ ಅದರ ಬೆನ್ನ ಮೇಲಿನ ಈ ಸಾಲುಗಳು ಸಾಕ್ಷ್ಯ ಹೇಳುತ್ತಿವೆ. ವಿಸ್ಮಯ ವಿಷುವಲ್ಸ್‌ ಇದನ್ನು ಪ್ರಕಟಿಸಿದೆ.

-೧೯೫೧ರಲ್ಲಿ  ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾದ ಈ ಚಿತ್ರವನ್ನು ಜನ ನೋಡಿ ಹುಚ್ಚೆದ್ದಿದ್ದರು. ಕನ್ನಡ ಚಲನಚಿತ್ರರಂಗದಲ್ಲಿ ಮೊಟ್ಟ ಮೊದಲ ಶತದಿನೋತ್ಸವವನ್ನು ಆಚರಿಸಿಕೊಂಡ ಈ ಸಿನಿಮಾ ನೋಡಲು ಪ್ರೇಕ್ಷಕರು ಮನೆಯ ಸಾಮಗ್ರಿಗಳನ್ನು ಅಡವಿಡುತ್ತಿದ್ದುದರಿಂದ ಚಿತ್ರವನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿಯ ಕೇಸ್‌ ಕೂಡ ದಾಖಲಾಗಿತ್ತು.

-೧೯೬೪ರ ಈ ಚಿತ್ರವು ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ಇರಲಿಲ್ಲವೆಂಬ ಕಾರಣಕ್ಕೆ ಕನ್ನಡ ಚಿತ್ರಪ್ರೇಮಿಗಳು ಯಾರದೇ ನಾಯಕತ್ವವಿಲ್ಲದೆ ಕೆಂಪೇಗೌಡ ರಸ್ತೆಯಲ್ಲಿ ಮೆರವಣಿಗೆ ಹೊರಟು ಪ್ರತಿಭಟನೆ ನಡೆಸಿದರು. ಚಿತ್ರರಂಗದ ಇತಿಹಾಸದಲ್ಲಿ ಸ್ವಯಂ ಪ್ರೇರಿತ ಪ್ರತಿಭಟನೆ ಇದೇ ಎನ್ನಬಹುದು.

-ಪಟ್ಟಾಭಿರಾಮರೆಡ್ಡಿಯವರ ಅತ್ಯುತ್ತಮವಾದ ಈ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸೆನ್ಸಾರ್ ಮಂಡಳಿಗಳು ಸಾರ್ವಜನಿಕ ಪ್ರದರ್ಶನಕ್ಕೆ ಅನರ್ಹ ಎಂದವು. ಪ್ರಮಾಣೀಕೃತ ಪತ್ರ ನೀಡಲು ನಿರಾಕರಿಸಿದ್ದವು. ಮುಂದೆ ಬೇರೆ ದಾರಿ ಕಾಣದೆ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ದೆಹಲಿ ಸಂಸತ್ತಿನಲ್ಲಿ ಅರ್ಧ ದಿನದ ಅಧಿವೇಶನವನ್ನು ಈ ಚಿತ್ರದ ಸೆನ್ಸಾರ್ ಕುರಿತ ಚರ್ಚೆಗೆ ಮೀಸಲಿಡಲಾಗಿತ್ತು.

-ಕಡಿಮೆ ವೆಚ್ಚದಲ್ಲಿ ವಿಭಿನ್ನ ಕತೆಯೊಂದಿಗೆ ತಯಾರಾದ ಈ ಚಿತ್ರವನ್ನು ಮುಖ್ಯ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯಾರೂ ಮುಂದೆ ಬರದಿದ್ದಾಗ ಚಿತ್ರತಂಡ, ಚಿತ್ರೀಕರಣ ನಡೆದಿದ್ದ ಹಳ್ಳಿಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದರು. ಅದಾದ ನಂತರ ಬೆಂಗಳೂರು ಮೈಸೂರು ಮುಂತಾದೆಡೆ ಬಿಡುಗಡೆಗೊಂಡ ಈ ಚಿತ್ರ ಶತದಿನೋತ್ಸವ ಆಚರಿಸಿತಲ್ಲದೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

-ಇದು ಕನ್ನಡದ ಅತ್ಯಂತ ಯಶಸ್ವಿ ಚಿತ್ರ. ಮಾನವೀಯ ಸಂಬಂಧಗಳ ಅಧ್ಯಯನಕ್ಕಾಗಿ ಅಮೆರಿಕಾ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದ್ದ ಈ ಚಿತ್ರದ ನಾಯಕ ಶಿವರಾಜ್‌ಕುಮಾರ್.

-ಈ ಚಿತ್ರವು ಸತ್ಯ ಕತೆಯಾಧರಿತವಾಗಿತ್ತಲ್ಲದೆ, ಚಿತ್ರೀಕರಣವೂ ಘಟನೆ ನಡೆದ ಊರಿನಲ್ಲಿಯೇ ನಡೆದಿತ್ತು

ಶೇರ್ ಮಾಡಿ
ನಿಮ್ಮ ಅನಿಸಿಕೆ ತಿಳಿಸಿ
ಪ್ರಮೋದ್ June 12, 2013 at 9:26pm
lokeshbaramasagara - ಅವರ ಬ್ಲಾಗ್ ಇಲ್ಲಿದೆ @ http://ravindratalkies.blogspot.in/
lokeshbaramasagara June 15, 2013 at 10:11pm
thanks pramod...its very good blog...what is he..? i am stunned..? he is also master viewer of non kannada films..
ದೇಶಮುಖ ಪೂಜಾರ್. June 17, 2013 at 8:55am
ಕನ್ನಡದ ಮಟ್ಟಿಗೆ ಪ್ರಶಂಸನೀಯ ಪ್ರಯತ್ನ. ಧನ್ಯವಾದಗಳು ರವೀಂದ್ರ ಅವರಿಗೆ...ಈ ತರಹದ ಕನ್ನಡ ಚಲನಚಿತ್ರ ಸಂಬಂಧಿ ಪುಸ್ತಕಗಳನ್ನು ರವೀಂದ್ರ ಹೆಚ್ಚು ಹೆಚ್ಚು ಹೊರತರಲಿ....
poojita baligar June 19, 2013 at 8:03pm
tunbaa olleya prayatna. shubhavagali
ಉಷಾ ಹೆಗ್ಗರಬಾವಿ March 25, 2014 at 11:20pm
ಉತ್ತಮ ಪುಸ್ತಕ. ಒಳ್ಳೆಯದಾಗಲಿ ಒಳ್ಳೆಯ ಪ್ರಯತ್ನಕ್ಕೆ
ಜೋಗಿ ‘ನೋಟ್‌ಬುಕ್‌’ನಿಂದ ಒಂದು ಸ್ಯಾಂಪಲ್‌
ಜೋಗಿ
ಕಡ ಕೊಡುವಿರಾ, ಒಂಭತ್ತು ಕತೆಗಳನು?
ವಿಕಾಸ ನೇಗಿಲೋಣಿ
(10)
(8)
(6)